
Workshop for volunteers being active in the Nilume blog.
ನಿಲುಮೆ ಪ್ರಕಾಶನದಿಂದ ಈಗಾಗಲೇ ಮೂರು ಪುಸ್ತಕಗಳು ಬಿಡುಗಡೆಯಾಗಿರುವುದು ತಮಗೇ ತಿಳಿದಿದೆ.ಈ ಪುಸ್ತಕಗಳ ಓದುಗರ,ನಿಲುಮೆಯ ಬರಹಗಾರರ ಹಾಗೂ ನಿಲುಮೆ ಪ್ರಕಾಶನದ ಸಾಂಸ್ಕೃತಿಕ ಚಳುವಳಿಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ
ಕೆಲಸ ಮಾಡಲು ಇಚ್ಚೆಯಿರುವ ಗೆಳೆಯರನ್ನೆಲ್ಲಾ ಸೇರಿಸಿಕೊಂಡು,ನಮ್ಮ ಮೊದಲನೇ ಪುಸ್ತಕ ಬಿಡುಗಡೆ ಸಮಯದಲ್ಲಿ ಮಾತನಾಡಿಕೊಂಡಿದ್ದಂತೆ ಬೆಂಗಳೂರಿನಿಂದ ಹೊರಗೆ ಒಂದು ಶಿಬಿರ ನಡೆಸುವ ತೀರ್ಮಾನಕ್ಕೆ ಬಂದಿದ್ದೇವೆ.
ಇದೇ ಅಕ್ಟೋಬರ್ 2 ಮತ್ತು 3 (ಶುಕ್ರವಾರ ಮತ್ತು ಶನಿವಾರ)ರಂದು ಶಿವಮೊಗ್ಗದ ಕುಪ್ಪಳಿಯ “ಕವಿಶೈಲ” ದಲ್ಲಿ ಎರಡು ದಿನಗಳ ಶಿಬಿರ ಆಯೋಜಿಸುತಿದ್ದೇವೆ.